ಮುಳ್ಳೇರಿಯ ಎ ಯು ಪಿ ಶಾಲಾ ಸುವರ್ಣ ಮಹೋತ್ಸವ ಸಮಿತಿಯ ಕಛೇರಿ ಮತ್ತು ಲಾಂಛನದ ಉದ್ಘಾಟನೆ
ಮುಳ್ಳೇರಿಯ ಎ ಯು ಪಿ ಶಾಲಾ ಸುವರ್ಣ ಮಹೋತ್ಸವದ ಭಾಗವಾಗಿ ಮುಳ್ಳೇರಿಯ ಶಾಲೆಯಲ್ಲಿ, ಸುವರ್ಣ ಮಹೋತ್ಸವ ಸಮಿತಿಯ ಕಛೇರಿ ಮತ್ತು ಲಾಂಛನದ ಉದ್ಘಾಟನೆ ನಡೆಯಿತು.ಕಾರಡ್ಕ ಬ್ಲೋಕ್ ಪಂಚಾಯತು ಅಧ್ಯಕ್ಷರಾದ ಶ್ರೀ ಪ್ರದೀಪ್ ರವರು ಕಛೇರಿಯನ್ನು ಉದ್ಘಾಟಿಸಿದರು.ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ವಿಷ್ಣು ಆಚಾರ್ಯ ಅವರು ಲಾಂಛನದ ಉದ್ಘಾಟನೆ ನಡೆಸಿದರು.ಈ ಸಂದರ್ಭದಲ್ಲಿ ಶಾಲಾ ಮೇನೇಜರ್ ಶ್ರೀ ಡಾ. ವಿ ಕೇಶವ ಭಟ್,ಕಾರಡ್ಕ ಗ್ರಾಮ ಪಂಚಾಯತು ವಿದ್ಯಾಭ್ಯಾಸ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಶ್ರೀ ರತ್ನಾಕರ,ರಕ್ಷಕ-ಶಿಕ್ಷಕ ಸಂಘದ ಶ್ರೀ ಗೋವಿಂದನ್,ಶಾಲಾ ಶಿಕ್ಷಕ ವೃಂದ,ಮಕ್ಕಳ ರಕ್ಷಕರು,ಊರ ಮಹನೀಯರು,ನಿವೃತ್ತ ಅಧ್ಯಾಪಕರು ಉಪಸ್ಥಿತರಿದ್ದರು. (more images in the gallery)